Thursday, August 5, 2021

ತನಕಂಪು ತನಗಿಂಪು

ಕುಕ್ಕರ್ ಒಲೆ ಮೇಲಿಟ್ಟು ಹತ್ತು ನಿಮಿಷವಾದರೂ ಸೀಟಿ ಬರಿಲ್ಲವೇಕೆಂದು, ಗಲಬರಿಸುತ್ತಿರುವ ಪಾತ್ರೆಗಳನ್ನು ಸಿಂಕಿನಲ್ಲಿಯೇ ಬಿಟ್ಟು ಗಮನಿಸಿದರೆಮುಚ್ಚಳದಿಂದ ಆವಿ ಆಚೆ ಬರುತ್ತಿತ್ತು. ಹೋ..ಮುಚ್ಚಳದ ಹಿಡಿಯ ತಿರುಪು ಸಡಿಲವಾಗಿತ್ತು.. ಬಿಗಿ ಮಾಡಲು ಮರೆತೆಚಮಚದ ಹಿಂಬಾಗದಿಂದ ಬಿಗಿಮಾಡಿ, ಎರುಡೂ ಕಡೆಯ ಹಿಡಿ ಪರೀಕ್ಷಿಸಿ ಮತ್ತೆ ಮುಚ್ಚಳ ಸೇರಿಸಿ ಒಲೆಯ ಮೇಲಿಟ್ಟೆ. ಮನಸ್ಸು ಬೆಳಿಗ್ಗೆ ಸ್ನೇಹಿತಳೊಬ್ಬಳೊಂದಿಗಿನ ಪೋನ್ ಸಂಭಾಷಣೆಯಿಂದ ಹೊರಗೆ ಬಂದಿರಲಿಲ್ಲ. ವಾಕಿಂಗ್  ಹೋಗಿದ್ದಾಗ ಪೋನ್ ಮಾಡಿದ್ದಳು. ನಾನುಹಾಯ್ ವಾಟ್ಸ್ ಅಪ್? ಏನು ಬೆಳಗ್ಗೆ ನೆನಸಿಕೊಂಡಿದೀಯಾ? ಆಲ್ ವೆಲ್?” ಅವಳುಹೀಗೇ ಸುಮ್ಮನೆವಾಕಿಂಗ್ ಬಂದಿದ್ದೆತುಂಬ ದಿನ ಆಯ್ತಲ್ಲಾ ಮಾತಾಡಿ?”

ಹೂಂಅತ್ತೆ ಮಾವಾ ಆರಾಮಾ , ಮಕ್ಕಳು?” ಇದೊಂದೆ ನನ್ನ ಪ್ರಶ್ನೆ.

ಅತ್ತೆ ಮಾವಾನಾ? ಅವರಿಗೇನು ಕೂತ್ಕಡೆ ತಿಂದ್ಕೊಂಡು ಉಂಡ್ಕೊಂಡು ಟಿವಿ ನೋಡ್ಕೊಂಡು ಮಾತ್ರೆಗಳು ನುಂಗ್ಕೊಂಡು ಆರಾಮಾಗಿದಾರೆ, ಮೊದ್ಲಾದರೆ, ಒಂದ್ಚೂರು ಹೊರಕ್ಕೋಗಿ ತರಕಾರಿ, ಹಣ್ಣು ತರೋರು, ಬಿಲ್ ಕಟ್ಟಕ್ಕೂ, ಪೋಸ್ಚ್ ಆಫೀಸು ಅಂತ ತಿರ್ಗೋರು..ಸ್ಕೂಲ್ ಹತ್ರನೂ ಹೋಗ್ ಬರೋರು..ಕರೋನಾ ಬಂದು ಹಾಳ್ಮಾಡ್ತು. ನನಗಂತೂ ಟೈಮಿಗ್ ಸರಿಯಾಗ್ ಮಾಡಹಾಕಿ ಸಾಕಾಗುತ್ತೆ. ನಮ್ಮ ಅಪ್ಪಾ ಅಮ್ಮಅಂತೂ ಪಾಪನೇಹೊರಕ್ಕೇ ಬಂದಿಲ್ಲ. ಕೊರೋನಾ ಭಯ ಅದೂ ಅಮ್ಮಾ ಅವರ ಅಣ್ಣ ಹೋಗ್ಬಿಟ್ಟರಲ್ಲಾ ಆಗ್ಲಿಂದ ಇನ್ನೂ ಭಯ. ಎಲ್ಲಾ ಮನೇಲೆೇ..ನಮ್ಮಣ್ಣ ಎಲ್ಲಾ ಆನ್ಲೈನ್ ಪೇಮೆಂಟ್ ಮಾಡಿ ಅವರಿಗೆ ಹೊರಗೆ ಹೋಗ್ದ್ಹಂಗೆ ಕಾಲ್ ಕಟ್ಟಾಕ್ದ್ಹಂಗೆ ಆಗಿದೆ. ಟಿವಿಗಿವಿ ನೋಡ್ಕೊಂಡು ಹೊತ್ತ್ಕಳಿತಿದಾರೆ ಪಾಪ. ಮಾಡ್ಹಾಕಿದ್ದು ತಿನ್ಕೊಂಡು ಟೈಮಿಗೆ ಸರಿಯಾಗಿ ಮಾತ್ರೆಗಳು ತಗೊಂಡರೆ ಸಾಕಪ್ಪ. ಅವರೇನು ಮಾಡೋದ್ ಬೇಡ”. 

ನಾನುನಾಳೆ ವಾಕಿಂಗ್ ಬಂದಾಗ ಮತ್ತೆ ಸಿಗತೀನಿ ಈಗ ರೋಡ್ ದಾಟಬೇಕುಎಂದು ಹೇಳಿ ಸಂಭಾಷಣೆ ಕತ್ತರಿಸಿ ವಾಕಿಂಗ್ ಮುಂದುವರೆಸಿದೆ.

ಪಕ್ಕದಲ್ಲಿ ಒಬ್ಬಾಕೆ ನಿಧಾನವಾಗಿ ನಡೆಯುತ್ತಾ ಪೋನಿನಲ್ಲಿ ಸಾವಕಾಶ ಮಾತಾಡುತ್ತಿದ್ದರು. “ನನ್ನ ಸೊಸೆನಾ.. ಅವಳಿಗೇನು ಕುಟ್ಟಬೇಕಾ ಬೀಸಬೇಕಾ? ಕಸಗುಡಿಸೋಕೂ ಪಾತ್ರೆ ತೊಳಿಯೋಕೂ ಕೆಲಸದವಳು ಬರ್ತಾಳೆ. ಬಟ್ಟೆ ಮಿಷನ್ಗೆ ಹಾಕ್ತಾಳೆ. ಕುಕ್ಕರಲ್ಲಿ ಬೇಯಿಸೋದ್, ಮಿಕ್ಸಿಯಲ್ಲಿ ಗರ್ ಅಂತ ತಿರುಗ್ಸೋದು ಏನ್ ಮಹಾ ಕೆಲಸಾ? ಈಗೇನು ಹೊತ್ತಿಗೆ ಸರಿಯಾಗಿ ಮಾಡ್ಬೇಕನ್ನೋದು ಇಲ್ಲಾ..ಮಗನಿಗೆ ಸ್ಕೂಲಿಲ್ಲಗಂಡನಿಗೆ ಕಾಲೇಜ್ ಇಲ್ಲ. ನನ್ನ ಮಗ ಕಾಲೇಜಲ್ಲೇ ಮೇಷ್ಚ್ರ ಕೆಲಸ. ಅವನೂ ಮನೇಲೆ ಕೆಲಸ ಮಾಡೋದುಅದಿಕ್ಕೆ ಇವಳು ಮಾಡ್ತಾಳೆ ..ಅವಳಿಗೆ ಸರಿಬಂದಾಗ..ಭಾರಿ ಸೊಂಪು. ನಮಗೆ ಮಾತ್ರ ಒಂದು ಚೂರು ಅಡಿಗೆ ಮಾಡಾಕಿದರೆ ಸಾಕಪ್ಪ ಹಾಳು ಮಾತ್ರೆಗಳು ನುಂಗಬೇಕಲ್ಲನನ್ನ ಮಗಳಿಗೇ ರೀ ಭಾರೀ ಕಷ್ಟ..ಮಗನಿಗೂ ಮನೆಯಿಂದಾನೇ ಸ್ಕೂಲು..ನಮ್ಮಳಿಯ ಕಾಲೇಜ್ ಪ್ರೊಫೆಸರು..ಕಾಲೇಜವರಾತುಂಬಾ ಪ್ರಾಣ ತಿಂತಾರಪ್ಪ..ಮನೆಯಿಂದನೇ ಆನ್ಲೈನ್ ಕ್ಲಾಸ್ ಕೊಡ್ತಾರೆ..ಅವರು ಟೈಂ ಸರಿಯಾಗಿ ಲಾಗಿನ್ ಆಗ್ಬೇಕುಅವರತ್ತೆ ಮಾವನಿಗೆ ಬೇರೇ ಡಯಾಬಿಟಿಸ್ ಅಷ್ಟರಲ್ಲೇ ಇವಳು ತಿಂಡಿ ಮಾಡ್ಬೇಕುಟೈಂಟೈಂಗೆ ಆಗಿ ಬಿಡಬೇಕು ಮಿಲ್ಟ್ರಿ ಸಿಸ್ಟಮ್ಮು..ತುಂಬಾ ಕಷ್ಟ..ಅದಿಕ್ಕೆ ತಿಂಡಿ ಒಂದು ತರುಸ್ಕೊಂತಾಳೆ. ಒಂದೊಂದು ಅನ್ನಕ್ಕೆ ಇಟ್ಟುಕೊಂಡು ಸಾರು ಸಾರು ಹುಳಿ ಮಾತ್ರ ತರಸ್ಕೋತಾಳೆ. ಅಡಿಗೆ ನಿಧಾನವಾಗಿ ಮಾಡ್ತಾಳೆ. ಕೆಲಸದವಳು ಬರೀ ಕಸ ಮುಸರೇ ಮಾಡ್ತಾಳಷ್ಟೆ. ಎಷ್ಟೇ ಮಿಕ್ಸಿ, ಕುಕ್ಕರ್ ಉಪಯೋಗಿಸಿದ್ರೂ ಎಲ್ಲ ಜೋಡಿಸ್ಬೇಕಲ್ಲ..ಬಟ್ಟೆ ಮಿಷನ್ನಿಗ್ಹಾಕಿದರೂ ತೆಗೆದು ಹರವ ಬೇಕು..ಮಡಿಸಿ ಇಟ್ಕೋಬೇಕು”. 

ಮಾತು ಕೇಳಿಸಿ ಕೊಳ್ಳುತ್ತಾ ನನ್ನ ನಡಿಗೆಯೂ ನಿಧಾವಾಗಿದ್ದನ್ನ ಗಮನಿಸಿ ಬೇಗ ಬೇಗ ಮನೆ ಕಡೆ ನಡೆದೆ. ಮನೆಗೆ ಬಂದು ಕಾಫಿ ಬೆರಸಿ, ಅಮ್ಮನಿಗೊಂಚೂರು ಶುಗರ್ಲೆಸ್ ಕೊಟ್ಟು, ನಾನೂ ಗುಟಕರಿಸಿ, ತಿಂಡಿ ತಯಾರಿಯಲ್ಲಿದ್ದೆ. ಕಾಫಿ ಕುಡಿದ ಲೋಟ ತೊಳೆಯಲು ಅಡಿಗೆ ಮನೆಗೆ ಬಂದ ಅಮ್ಮನಿಗೆಅಮ್ಮಾ ಅವಳು ಫೋನ್ ಮಾಡಿದ್ದಳುಹೀಗಂತೆ

ಅಂತ ಹೇಳಿ ಪಾರ್ಕನಲ್ಲಿ ಆಕೆ ಮಾತಾಡುತ್ತಿದ್ದದ್ದನ್ನೂ ಸಂಕ್ಷೇಪವಾಗಿ ಹೇಳಿ ನಕ್ಕೆ. ಅದಕ್ಕೆ  ಅಮ್ಮಾಅದು ಹಂಗೆ ಕಣೇ..ನಮ್ಮಮ್ಮ ಹೇಳ್ತಿದ್ಳು ತನ್ನ ಕಂಪು ತನಗಿಂಪು ಪರರ ಕಂಪು ಪಾಪಿಷ್ಟ ಕಂಪು ಅಂತ, ಕುಕ್ಕರ್ ನೀರು ಸೋರ್ತಿದೆ ನೋಡು ಸರೀಗೆ ಮುಚ್ಚಳ ಹಾಕಿಲ್ಲ..ಅದೇನು ಸರಿಯಾಗಿ ಬಿಗಿ ಮಾಡಿಸ್ಬಾರ್ದೆ? ನಿನ್ನ ಕೈಲಿ ಬಿಗಿ ಇಲ್ಲ..ಗಂಡಸರ ಕೈಗೆ ಕೊಟ್ಟರೆ ಮುರೀತಾರೆ ಇಲ್ವಾ ರಾಂಗ್ ತ್ರೆಡ್ ಮಾಡುತಾರೆ..ನಮ್ಮ ಪದ್ದತೀ ನೇ ಸರಿ..ನೀರು ಕುದ್ದ ಮೇಲೆ ಅಕ್ಕಿ ಹಾಕಿದರೆ ಅನ್ನ ಚೆನ್ನಾಗಾಗುತ್ತೆಇದೇನು ಎಲ್ಲಾ ಸೇರ್ಸಿ ಮುಚ್ಚಿಡೋದು. ಅನ್ನವಾದರೂ ಅಷ್ಚೆಮಾತಗಳಾದರೂ ಅಷ್ಚೆ..ನೇರವಾಗೇ ಇರಬೇಕು. ಮುಚ್ಚಿಟ್ಟರೆ ಎಲ್ಲೆಲ್ಲೋ ಸೋರುತ್ತೆ....ಇಲ್ಲಾಂದರೆ ಅದೋ ಆವಿ ಹೊರಗೆ ಬಂದ್ಹಂಗೆ ಸಂಸಾರದ ವಿಷಯನೂ ಹೊರಗೆ ಬರುತ್ತೆ. ಮುಚ್ಚಿಟ್ಟರೆ ತಾನೆ ಎಷ್ಟುಹೊತ್ತು? ಯಾವತ್ತಾದರೂ ಸ್ಪೋಟವಾಗೋದೆ! ಆದರೂ  ಸೂಕ್ಷ್ಮ ಇರಬೇಕು ..” ಅಂದಳು

ನಾಳೆಯಿಂದ ಫೋನ್ ಮನೆಗಿಟ್ಟು ಹೋಗುವಾಕಿಂಗ್ ಗೆ  ಪೋನ್ ಯಾಕೆ?”  ಸೇರಿಸಿದಳು. ಅಮ್ಮ ಮಾತು ಮುಗಿಸುವುಗರೊಳಗೇ ಮತ್ತೆ ಕುಕ್ಕರ್ ಮುಚ್ಚಳ ತೆಗೆದು ತೊಳೆದು ಸರಿಯಾಗಿ ಕೂರಿಸಿದೆ

ಹೆಂಗಸರು ತಮ್ಮ ಪಾತ್ರ ಬದಲಾದಂತೆ ಅವರ ಸ್ವಭಾವವೂ ಬದಲಾಗುವುದು ಅಸಹಜವೆನ್ನಿಸಿದರೂ ಅದು ಸರ್ವೇ ಸಾಮಾನ್ಯವಾಗಿರುವುದು ಸತ್ಯವೆನಿಸಿತು

No comments:

Post a Comment