Monday, May 4, 2026

ಕೃಷ್ಣನ ಪ್ರೇಮ ಲೀಲೆ

ಕುರುಕ್ಷೇತ್ರ ಮಹಾಯುದ್ಧ ಮುಗಿದಿದೆ. ಕಥೆಯೊಂದು ಮಟ್ಟಕ್ಕೆ ಮುಟ್ಟಿದೆ. ಶ್ರೀಕೃಷ್ಣನು ಇನ್ನು ದ್ವಾರಕೆಯ ಕಡೆಗೆ ದೃಷ್ಠಿ ಹೊರಳಿಸಿದ್ದಾನೆ. ಶ್ರೀ ಕೃಷ್ಣನು ಎಂದಿನಂತೆ ಸದಾ ನಗುವನ್ನೇ ಧರಿಸಿ, ದ್ವಾರಕೆಯನ್ನು ಸಮೀಪಿಸುತ್ತಲೇ ಶಂಖಾನಾದವನ್ನು ಮಾಡುತ್ತಾನೆ. ಯಾದವರು ಹೇಗಿದ್ದವರು ಹಾಗೆಯೇ ಓಡೋಡಿ ಬಂದು ಕೃಷ್ಣನನ್ನು ನೋಡಲು ಸೇರಿಸುತ್ತಾರೆ. ಕೃಷ್ಣ ಎಲ್ಲರ ಸ್ವಾಗತ ಸತ್ಕಾರಗಳನ್ನು ಸ್ವೀಕರಿಸಿ ಅವರೊಂದಿಗೆ ಮುದ್ದು ಮಾತುಗಳನ್ನಾಡಿ ತನ್ನ ತಾಯಂದಿರನ್ನು ಕಾಣಲು ಹೊರಡುತ್ತಾನೆ. 

 ತಾಯಂದಿರು ಕೃಷ್ಣನನ್ನು ಸಮೀಪಿಸಿದಾಗ ಅವರ ಸ್ತನ್ಯಗಳಲ್ಲಿ ಹಾಲು ಉಕ್ಕುತ್ತದೆ . ಅಂದರೆ ಅವರ ದೃಷ್ಠಿಯಲ್ಲಿ ಕೃಷ್ಣನಿನ್ನೂ ಬಾಲ ಗೋಪಾಲನೇ. ಪ್ರಪಂಚದ  ಮಹಾ ಯುದ್ಧದ ಸಾರಥಿಯೇ ಆಗಿದ್ದಿರಬಹುದು, ಗೀತೋಪದೇಶ ಮಾಡಿದ ಜಗದ್ಗುರುವೇ ಆಗಿರಬಹುದು..ತಾಯಂದಿರ ಕಣ್ಣಲ್ಲಿ ಅವನಿನ್ನೂ ಮಗುವೇ! ಬಾಲ ಗೋಪಾಲನೇ! ಕೃಷ್ಣನೂ ಆ ಭಾವನೆಯಲ್ಲಿಯೇ ಅವರಿಗೆ ನಮಸ್ಕರಿಸುತ್ತಾನೆ.


ಈ ಸೂಕ್ಷ್ಮ ನಮ್ಮಲ್ಲಿ ಅಳವಡಿಸಿಕೊಳ್ಳುವುದು ಬಲು ಕಷ್ಠ. ನಾವು ಬೆಳೆದು ದೊಡ್ಡವರಾಗುವುದು ಸುಲಭ. ಸಂದರ್ಭಾನುಸಾರವಾಗಿ ವರ್ತಿಸುವುದು ಬಹಳ ಕಷ್ಟ. ಈಗ ಓದು ಬರಹ ಮುಗಿಸಿ ಉನ್ನತ ಸ್ಥಾನದಲ್ಲಿರುವ ಮಗನನ್ನು ತಂದೆ-ತಾಯಿ ಗೌರವದಿಂದ ನಡೆಸಿಕೊಂಡರೆ, ಅವರಿಗೆ ಬೇಕಾದ ಮಟ್ಟಕ್ಕೆ ಅವನು ಇಳಿಯಲಾರ.  ಅವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲಾರ. ಇದರಿಂದ ಇಬ್ಬರಿಗೂ ಅಸಂತೃಪ್ತಿಯೇ. ಅವರು ತಂದೆ-ತಾಯಿಯಂತೆ ಇರಲಾಗುತ್ತಿಲ್ಲ. ಆತ ಮಗನಂತೆ ಇರಲಾಗುತ್ತಿಲ್ಲ. ತನ್ನ ವಯಸ್ಸು, ಸ್ಥಿತಿ-ಗತಿಗಳನ್ನು ದಾಟಿದಲ್ಲದೇ ತಂದೆ ತಾಯಿಗೆ ಮಗನಾಗಲಾರ!  ಬಂಧು ಮಿತ್ರರಿಗೆ ಸ್ನೇಹಿತನಾಗಲಾರ! ಸಮಾಜಕ್ಕೆ ಸೇವಕನಾಗಲಾರ! ಹೀಗೆ ಎಲ್ಲ ಪಾತ್ರಗಳನ್ನೂ ನಾವು ನಮ್ಮಿಂದ ಏಕಕಾಲದಲ್ಲಿ ವ್ಯಕ್ತ ಮಾಡುವಂತಾಗಬೇಕು, ಹಾಗೆ ವ್ಯಕ್ತಮಾಡುವುದು ಆಧ್ಯಾತ್ಮಿಕ ಸಾಧನೆ. ಸಮಾಧಿ ಸ್ಥಿತಿ. ಏಕಕಾಲದಲ್ಲಿ ಎಲ್ಲಾ ಭಾವನೆಯಲ್ಲೂ, ಎಲ್ಲಾ ಅರ್ಥದಲ್ಲಿಯೂ ಜಾಗರೂಕನಾಗಿದ್ದು, ಎಲ್ಲವನ್ನೂ ಸಮದೃಷ್ಠಿಯಿಂದ ನೋಡುವಂಥದ್ದೇ ಸಮಾಧಿ. ಅಂದರೆ ಇಂಗಿತವರಿತು ವರ್ತಿಸುವುದು, ಅಥವಾ ಸನ್ನಿವೇಷಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದು ಕೊಳ್ಳುವುದು. 

ಈ ಸೂಕ್ಷ್ಮವನ್ನು ವ್ಯಾಸರು  ಭಾಗವತ ಕಥೆಯ ಸನ್ನಿವೇಷದಿಂದ ಉಪದೇಶಿಸಿದ್ದಾರೆ


#Shrimadbhagavathamu divya jeevana maargamu #MopideviKrishnaSwamy #MK

No comments:

Post a Comment